Posts

ನಂದಿಕೋಲು

Image
  ನಂದಿಕೋಲು ನಂದಿಕೋಲು ಕುಣಿತ ನಂದಿಕೋಲು ಕುಣಿತವು, ನಂದಿಕೋಲನ್ನು ಮೇಲೆತ್ತಿ ಹಿಡಿದು ಮಾಡುವ ನೃತ್ಯ. ಇದನ್ನು ವೀರಶೈವ ಧರ್ಮಕ್ಕೆ ಸೇರಿದವರು ಕರ್ನಾಟಕದ ಅನೇಕ ಭಾಗಗಳಲ್ಲಿ ಆಚರಿಸುತ್ತಾರೆ. ಮೂಲತಃ ಧಾರ್ಮಿಕವಾದ ನೃತ್ಯಪ್ರಕಾರವಾಗಿದೆ. ನಂದಿಕೋಲು ಬಹಳ ಗಟ್ಟಿಮುಟ್ಟಾದ ಬಿದಿರಿನ ಗಳ. ಆಯಾ’ಪ್ರದೇಶವನ್ನು ಅವಲಂಬಿಸಿ ಈ ಕೋಲು ಹದಿನೈದು ಅಡಿಗಳಿಂದ ಹಿಡಿದು, ಐದು ಅಡಿಗಳವರೆಗೆ ಇರುತ್ತದೆ. ಇದು ಮರದಿಂದ ಮಾಡಿದ ಮಂಟಪಾಕೃತಿಯ ಪುಟ್ಟ ಪೀಠ. ಇದನ್ನು ಆ ಬಿದಿರಗಳಕ್ಕೆ, ಬುಡದಿಂದ ನಾಲ್ಕು ಅಡಿಗಳ ಎತ್ತರದಲ್ಲಿ ಕಟ್ಟುತ್ತಾರೆ. ಹಿತ್ತಾಳೆಯಿಂದ ಮಾಡಿದ, ನಂದಿಯ ಪುಟ್ಟ ವಿಗ್ರಹವನ್ನು ಆ ಪೀಠದ ಮೇಲೆ ಇಡುತ್ತಾರೆ. ಆ ವಿಗ್ರಹದಿಂದ ಮೇಲೆ, ಅನೇಕ ಟೊಳ್ಳಾದ ಬಳೆಗಳನ್ನು, ಒಂದರ ಮೇಲೆ ಒಂದರಂತೆ, ಗಳದ ಸುತ್ತಲೂ ಇಡುತ್ತಾರೆ. ಇದೆಲ್ಲದರ ಅನಂತರ, ನಂದಿಕೋಲಿನ ತುದಿಯಲ್ಲಿ, ಕೆಂಪು ಅಥವಾ ಕೇಸರಿ ಬಣ್ಣದ ಬಾವುಟ ಇರುತ್ತದೆ. ಈ ಬಾವುಟದ ಬಟ್ಟೆಯಲ್ಲಿ, ಶಿವಲಿಂಗ ಮತ್ತು ಒಂದೆರಡು ನಂದಿಗಳ ಚಿತ್ರವನ್ನು ಹೊಲಿದಿರುತ್ತಾರೆ. ಈ ಬಾವುಟಕ್ಕಿಂತ ಮೇಲೆ, ಕಳಶವೆಂದು ಕರೆಯಲಾಗುವ ಚಿಕ್ಕ ಛತ್ರಿ ಇರುತ್ತದೆ. ಈ ಕುಣಿತವನ್ನು ನವರಾತ್ರಿಯ ಸಂದರ್ಭದಲ್ಲಿ ಮೈಸೂರು ಅರಮನೆಯಲ್ಲಿಯೂ ನೋಡಬಹುದು. ವೀರಶೈವರ ಪ್ರಕಾರ, ವೀರಭದ್ರನು, ದಕ್ಷಬ್ರಹ್ಮನನ್ನು ಸಂಹಾರ ಮಾಡಿದ ನಂತರ ನಡೆಸಿದ ವಿಜಯಯಾತ್ರೆಯ ಭಾಗವಾಗಿ ಈ ಕುಣಿತವನ್ನು ಪರಿಗಣಿಸಬೇಕು.

ಕನ್ನಡ ಜಾನಪದ

Image
ಕನ್ನಡ ಜಾನಪದ ಇವು ನೂರಾರು ವರ್ಷಗಳಿಂದ ಸಾವಿರಾರು ಜನಗಳ ಬಾಯಿಂದ ಹರಿದು ಬಂದ ನುಡಿಗಳು,ನಮ್ಮ ಹಳ್ಳಿಗಳಲ್ಲಿ ಕಲೋಪಾಸಕತ್ವವನ್ನು,ಸೃಜನಶೀಲತೆಯನ್ನು, ಮತ್ತು ಮಾಧುರ್ಯವನ್ನು ಹಳ್ಳಿಗರಿಗೆ ತಿಳಿಯದಂತೆ ಅವರ ಜೀವನ ವಿಧಾನವನ್ನಾಗಿ ಪರಿವರ್ತಿಸಿದ ಸಂಸ್ಕೃತಿಯೊಂದರ ಹೆಜ್ಜೆಗುರುತುಗಳು. ಪ್ರತಿಯೊಂದು ಸಾಮಾಜವೂ ತನ್ನ ಪುರಾತನರ ಸಾರವನ್ನು ಹೀರಿ ತನ್ನ ಸದ್ಯದ ಬದುಕಿಗೊಂದು ಅರ್ಥವನ್ನೂ,ತನ್ನ ಸದ್ಯದ ಸಮಸ್ಯೆಗಳಿಗೊಂದು ಪರಿಹಾರವನ್ನೂ,ತನ್ನ ಭಕ್ತಿಗೊಂದು ರೂಪವನ್ನೂ -ಕಲೆ,ತಂತ್ರಜ್ಞಾನ ಇತ್ಯಾದಿಗಳ ಬೆಳವಣಿಗೆಯನ್ನೂ ಸಾಮುದಾಯಿಕವಾಗಿ ನಿರ್ವಹಿಸುತ್ತದೆ. ಜಾನಪದ ? ಪ್ರಾಯಶಃ ಸಹಸ್ರಾರು ವರ್ಷದ ಹಿಂದೆ ಜಗತ್ತಿನಲ್ಲೆಲ್ಲ ಇದ್ದುದ್ದು ಜಾನಪದವೊಂದೇ, ಮಾನವನು ತಾನು ಮಾಡುವ ಕೆಲಸಗಳಲ್ಲೆಲ್ಲಾ ತನ್ಮಯತೆಯನ್ನು ತುಂಬಲು ಮಾಡಿದ ಪ್ರಯತ್ನಗಳ ಸರಮಾಲೆಯೇ ಜಾನಪದವಾಗಿರಬಹುದು. ಜಾನಪದ ತನ್ನ ಸುತ್ತಲಿನ ಪರಿಸ್ಥಿತಿಗೆ ತಕ್ಕಂತೆ ತಂತ್ರಜ್ಞಾನಗಳನ್ನೂ,ಅರೋಗ್ಯ ರಕ್ಷಣೆಗೆ ವೈದ್ಯಕೀಯವನ್ನು, ಪ್ರಕೃತಿಯ ಬಿರುಸಿಗೆ ಉತ್ತರವಾಗಿ ಭಕ್ತಿಯನ್ನೂ ಬೆಳೆಸಿಕೊಂಡಿರಬಹುದು. FaceBook YouTube
  ಸಂದಿ ಗೊಂದಿಯಲಿ ಹಳಸಿ ನಾರುತಿರೋ ಈ ಸಂಸ್ಕೃತಿಯ ನಡುವೆ ತನ್ನದೇ ಛಾಪು ಊಳಿಸಿಕೊಳ್ಳಲು ಶತ ಶತ ವಾಗಿ ಪ್ರಯತ್ನಿಸುತ್ತಿರುವ ಜಾನಪದ ತಳಹದಿಯ ಗಟ್ಟಿ ಮಾಡುವ ಪ್ರಯತ್ನ “ಕನ್ನಡ ಫೊಕ್ಸ್”( Kannada Folks) .