ನಂದಿಕೋಲು

 

ನಂದಿಕೋಲು

ನಂದಿಕೋಲು ಕುಣಿತ


ನಂದಿಕೋಲು ಕುಣಿತವು, ನಂದಿಕೋಲನ್ನು ಮೇಲೆತ್ತಿ ಹಿಡಿದು ಮಾಡುವ ನೃತ್ಯ. ಇದನ್ನು ವೀರಶೈವ ಧರ್ಮಕ್ಕೆ ಸೇರಿದವರು ಕರ್ನಾಟಕದ ಅನೇಕ ಭಾಗಗಳಲ್ಲಿ ಆಚರಿಸುತ್ತಾರೆ. ಮೂಲತಃ ಧಾರ್ಮಿಕವಾದ ನೃತ್ಯಪ್ರಕಾರವಾಗಿದೆ.

ನಂದಿಕೋಲು ಬಹಳ ಗಟ್ಟಿಮುಟ್ಟಾದ ಬಿದಿರಿನ ಗಳ. ಆಯಾ’ಪ್ರದೇಶವನ್ನು ಅವಲಂಬಿಸಿ ಈ ಕೋಲು ಹದಿನೈದು ಅಡಿಗಳಿಂದ ಹಿಡಿದು, ಐದು ಅಡಿಗಳವರೆಗೆ ಇರುತ್ತದೆ. ಇದು ಮರದಿಂದ ಮಾಡಿದ ಮಂಟಪಾಕೃತಿಯ ಪುಟ್ಟ ಪೀಠ. ಇದನ್ನು ಆ ಬಿದಿರಗಳಕ್ಕೆ, ಬುಡದಿಂದ ನಾಲ್ಕು ಅಡಿಗಳ ಎತ್ತರದಲ್ಲಿ ಕಟ್ಟುತ್ತಾರೆ. ಹಿತ್ತಾಳೆಯಿಂದ ಮಾಡಿದ, ನಂದಿಯ ಪುಟ್ಟ ವಿಗ್ರಹವನ್ನು ಆ ಪೀಠದ ಮೇಲೆ ಇಡುತ್ತಾರೆ. ಆ ವಿಗ್ರಹದಿಂದ ಮೇಲೆ, ಅನೇಕ ಟೊಳ್ಳಾದ ಬಳೆಗಳನ್ನು, ಒಂದರ ಮೇಲೆ ಒಂದರಂತೆ, ಗಳದ ಸುತ್ತಲೂ ಇಡುತ್ತಾರೆ.

ಇದೆಲ್ಲದರ ಅನಂತರ, ನಂದಿಕೋಲಿನ ತುದಿಯಲ್ಲಿ, ಕೆಂಪು ಅಥವಾ ಕೇಸರಿ ಬಣ್ಣದ ಬಾವುಟ ಇರುತ್ತದೆ. ಈ ಬಾವುಟದ ಬಟ್ಟೆಯಲ್ಲಿ, ಶಿವಲಿಂಗ ಮತ್ತು ಒಂದೆರಡು ನಂದಿಗಳ ಚಿತ್ರವನ್ನು ಹೊಲಿದಿರುತ್ತಾರೆ. ಈ ಬಾವುಟಕ್ಕಿಂತ ಮೇಲೆ, ಕಳಶವೆಂದು ಕರೆಯಲಾಗುವ ಚಿಕ್ಕ ಛತ್ರಿ ಇರುತ್ತದೆ.

ಈ ಕುಣಿತವನ್ನು ನವರಾತ್ರಿಯ ಸಂದರ್ಭದಲ್ಲಿ ಮೈಸೂರು ಅರಮನೆಯಲ್ಲಿಯೂ ನೋಡಬಹುದು. ವೀರಶೈವರ ಪ್ರಕಾರ, ವೀರಭದ್ರನು, ದಕ್ಷಬ್ರಹ್ಮನನ್ನು ಸಂಹಾರ ಮಾಡಿದ ನಂತರ ನಡೆಸಿದ ವಿಜಯಯಾತ್ರೆಯ ಭಾಗವಾಗಿ ಈ ಕುಣಿತವನ್ನು ಪರಿಗಣಿಸಬೇಕು.

Comments

Popular posts from this blog

ಕನ್ನಡ ಜಾನಪದ